ನಿನ್ನೆ ಸಂಜೆ ಮ್ಯೂಸಿಕ್ ಕ್ಲಾಸ್ ಗೆ ಹೋಗ್ತಿದ್ದೆ. ನನ್ನ ಫ್ರೆಂಡ್ ಪುಷ್ಪ ಜೊತೇಲೆ ಇದ್ಲು. ಅಲ್ಲೊಂದು ಬಸ್ ಸ್ಟಾಪ್ ಬಳಿ ಒಬ್ಬ ತಾತ ಬಿಕ್ಷೆ ಬೇಡುತ್ತಿದ್ದ.. ಅದೇನೋ ಕಸಿವಿಸಿ ಮನದ ತುಂಬ. ಅನಿವಾರ್ಯ ಕಾರಣಗಳಿಂದ ತಾತನ ಪಕ್ಕದಲ್ಲೇ ಹೋಗಬೇಕಾಗಿ ಬಂತು. ಎಲ್ಲರಲ್ಲಿ ಬೇಡುವಂತೆ ನಾ ಹಾಕಿದ್ದ ಬಟ್ಟೆಯನ್ನ ಸಣ್ಣದಾಗಿ ಎಳೆದು ಕೈ ಮುಂದೆ ಹಿಡಿದ. ನಾನೋ ಬರಿಗೈಯಲ್ಲಿ ಹೋಗಿದ್ದೆ. ಪುಷ್ಪ ನ ಹತ್ರ ದುಡ್ಡು ಕೇಳಿ ಕೊಡ್ಲ ಅತ್ವ ಬೇಡ್ವ ಅನ್ನೋ ಯೋಚೆನೆಲೀ ಮುಂದೆ ಹೋಗಿಬಿಟ್ಟೆ. ಆದ್ರೆ ಮತ್ತೆ ಮುಂದೆ ಕಾಲು ಸರಿಯಲು ನಿಧಾನ ಮಾಡಿದವು.
ಬೇರೆ ದಾರಿ ಕಾಣದೆ ಪುಷ್ಪನ ಹತ್ತಿರ ಚಿಲ್ಲರೆ ಇದ್ರೆ ಕೊಡು ಅಂದೆ. ಅವ್ಳು ಒಂದ್ಸಲ ನನ್ಮುಖ ದಿಟ್ಟಿಸಿ ನೋಡಿದ್ಲು. ಮೂರು ಸೆಕೆಂಡ್ ಗಲ್ಲಿ 2 ರುಪಾಯಿ ಕೈಯ್ಯಲ್ಲಿತ್ತು.
ದುಡ್ಡು ಕೊಡಬೇಕಾದ್ರೆ ಆ ಮುದಕನ್ನ ಗಮನಿಸಿದೆ. ತುಂಬ ಸೊರಗಿದ ದೇಹ ,ಮೈಮೇಲೆ ಪಂಚೆ ಬಿಟ್ರೆ ಬೇರೆ ಏನೂ ಇರಲಿಲ್ಲ , ಅದೂ ಈ ಚಳಿಯಲ್ಲಿ!!! ಕಣ್ಣಲ್ಲಿ ಭೂಮಿಗೆ ಭಾರ ಏನೋ ಅನ್ನೋ ಭಾವ,......................:( ,
ಒಟ್ಟಾರೆ ಮತ್ತೆ ನೋಡಲಾಗದ ನೋಟ . ಹಾಗಂತ ನಾನು ಯಾವ ಬಿಕ್ಷುಕರನ್ನು ನೋಡೇ ಇಲ್ಲ ಅಂತ ಅಲ್ಲ, ಆದ್ರೆ ನಾನು ಅವರಿಗೆ ದುಡ್ಡು ಕೊಡೋವಾಗ ಏನೇನೋ ಯೋಚನೆಗಳು . ಬಿಕ್ಷೆ ಕೊಟ್ಟರೆ ನಾವುಗಳೇ ಅದನ್ನ ಸಪೋರ್ಟ್ ಮಾಡಿದ ಹಾಗಾಗುತ್ತೆ ಅಂತ ಜನ ಹೇಳೋದನ್ನ ಕೇಳಿದೀನಿ , ಅವ್ರ ಲಾಜಿಕ್ ನನಗಂತೂ ಅರ್ಥ ಆಗಿಲ್ಲ.
ನಂಗೊತ್ತು ಆ ಕ್ಷಣಕ್ಕೆನಾ ಏನೂ ಮಾಡಲಾರೆ ಅಂತ. ಅದರೂ ಕೊಡೊ ಆ ದುಡ್ಡು ಆ ಹೂತ್ತಿನ ಕೂಳಿಗೆ ಸ್ವಲ್ಪ ಸಹಾಯ ಮಾಡುತ್ತೆ ಅಲ್ವ? ಅವರುಗಳು ಅದಕ್ಕಿಂತ ಹೆಚ್ಚಿನದೇನನ್ನು ಬಯಸೋದಿಲ್ಲ.
ಆಗ ನಂಗೆ ಅಸ್ಟೆ ವಯಸ್ಸಾದ, ಆರೋಗ್ಯದಿಂದ 84 ವಸಂತ ಗಳನ್ನನನ್ನ ಹಿಂದೆ ಸರಿಸಿರುವ, ಈಗಲೂ ರಾಜನಂತೆ ಬಾಳುತ್ತಿರುವ ನನ್ನ ತಾತ ನೆನಪಾಗಿದ್ದು ನಿಜ. ಇನ್ನೂ ಪೇಪರ್ ನ ಯಾವುದೇ ಕನ್ನಡಕ ಇಲ್ದೆ ಓದುತ್ತಾರೆ ಅಂದ್ರೆ ನಂಬ್ತೀರಾ? ಒಳ್ಳೆ ವಾಗ್ಮಿ ಕೂಡ. ಸ್ವಲ್ಪ ಕಾಲು ನೋವು ಇದೆ ಅಸ್ಟೆ .ನನಗೆ ತ್ರಿವಿ ಅಂತ ಅಡ್ಡ ಹೆಸರು ಇಟ್ಟು ಕರೆದ ನನ್ನ ತಾತ ನನಗಚ್ಚುಮೆಚ್ಚು . ಫ್ರೆಂಡ್ಸು ಹಾಗೆ ಕರೆದಾಗ ಭಯಂಕರ ಖುಷಿ ನಂಗೆ :)
ಆ ಮುದುಕನ ಅಸಹಾಯಕ ಒಂದು ನೋಟ ಅಂತವರ ಬಗ್ಗೆ ಏನಾದ್ರೂ ಮಾಡಬೇಕೆನ್ನುವ ತುಡಿತ ಜಾಸ್ತಿ ಮಾಡಿತು. ಅಲ್ಲಿವರೆಗೆ ಅವಶ್ಯಕತೆ ಬಿದ್ದಾಗ ಕೈಲಾದ ಸಹಾಯಾ ಮಾಡೋಣ ಅಂತ ನಿರ್ಧಾರ ಮಾಡಿದಿನಿ ... ?
ನಿವೆನಂತೀರ ?

No comments:
Post a Comment