ಅದು ಡಿಗ್ರಿ ಕ್ಲಾಸ್ ನ ಮೊದಲ ದಿನ. ನನಗೋ ತುಂಬಾ ಭಯ . ಮೊದಲು ಮಾತನಾಡಿಸಿದ್ದು ಪ್ರವೀಣ್ ಅನ್ಸುತ್ತೆ.ಅವನು ಕೂಡ ನಂತರಾನೆ ಹೊಸಬ ಅಂತ ಮುಖದ ಗಾಬರಿ ಹೇಳುತಿತ್ತು. ಮೊದಲು ಇಂಗ್ಲಿಷ್ ಕ್ಲಾಸ್ ಇತ್ತು. ಗ್ರಾಮರ್ ಮಾಡುತ್ತಿದ್ದರು. ಲೆಕ್ಚರರ್ ಕೇಳುತ್ತಿದ್ದ ಪ್ರಶ್ನೆ ಗಳಿಗೆ ಪಟ ಪಟ ಅಂತ ಉತ್ತರ ಬರುತ್ತಿತ್ತು ಹಿಂದಿನ ಸಾಲಿನಿಂದ.ನನಗೆ ಇಂಗ್ಲಿಷ್ ಗ್ರಾಮರ್ ಅಂದ್ರೆ ಕಬ್ಬಿಣದ ಕಡಲೆ. ಸಹಜವ್ವಗೆ ಗಾಬರಿಯಾಗಿದ್ದೆ .ಹಿಂದಿನ ಬೆಂಚಿನ ಆ ಮೂವರು ಹುಡಿಗಿಯರ ಬಳಿ ಎಲ್ಲ ಪ್ರಶ್ನೆಗಳಿಗೆ ಬಹುಶ : ಉತ್ತರ ಇತ್ತು. ನಂತರ ಆ ಮೂವರು ನನ್ನದೇ ಬ್ರಾಂಚ್ ಅಂತ ತಿಳಿದು ಖುಷಿಯಾಗಿತ್ತು.
ಅವರಲ್ಲಿ ಒಬ್ಬಳು ಭಯಂಕರ ಚುರುಕಾಗಿ ಎಲ್ಲರ ಬಳಿ ಮಾತನಾಡುತ್ತ , ನಗುತ್ತ , ನಗಿಸುತ್ತ ಜಿಂಕೆಯಂತೆ ಓಡಾಡುತ್ತಿದಳು , ಅವಳೇ ಯಮುನಾ ಲಕ್ಷ್ಮಿ ಹೆಸರು ತಿಳಿದು ಇದೇನಿದು ವಿಚಿತ್ರ ಒಬ್ಬಳಿಗೆ ಎರೆಡೆರೆಡು ಹೆಸರು ಅಂದುಕೊಂಡೆ. ಅವಳ ಇಡಿ ಗುಂಪು ಕಾಲೇಜ್ ಗೆ ಸೇರಿತ್ತು . ನಾನು ಬೇರೆ ಕಾಲೇಜ್ ನಿಂದ ಬಂದಿದ್ದೆ . ಯಾರು ಪರಿಚಯ ಇರಲಿಲ್ಲ. ಇವರ ಗುಂಪು(5 ಜನ ಅನುತ್ತೆ )ಇಡೀ ಕಾಲೇಜ್ನ ಇಂಚಿಂಚು ಬಿಡದೆ ಇಣುಕುತ್ತಿತ್ತು. ಅಂದೇ ನಿರ್ಧಾರ ಮಾಡಿದ್ದೆ ಇವಳನ್ನ ಫ್ರೆಂಡ್ ಮಾಡಿಕೊಳ್ಳಬೇಕು ಅಂತ.ನಿರ್ಧಾರದ ಹಿಂದೆ ಇದ್ದ ಕಾರಣ ಇಂದಿಗೂ ಹೊಳೆದಿಲ್ಲ. ಆದರೆ ಅವತ್ತಿನ ನನ್ನ ನಿರ್ಧಾರ ನನ್ನ ಜೀವನದ ಗತಿ ಬದಲಿಸಿದ ನಿರ್ಧಾರ ಅಂತ ತಿಳಿಯಲು ಒಂದು ವರ್ಷ ಕಳೆಯಬೇಕಾಯಿತು. ಸಾಮಾನ್ಯ ಆವರೇಜ್ ಸ್ಟುಡೆಂಟ್ ಆಗಿದ್ದ ನನ್ನನ್ನು ಕ್ಲಾಸ್ನ ಟಾಪರ್ ಆಗುವಂತೆ ಮಾಡುವಲ್ಲಿ ಸಿಂಹಪಾಲು ಅವಳದು. ಅವಳು ಹೇಳುತ್ತಿದ್ದ ಮಾತು ಇಂದಿಗೂ ನೆನಪಿದೆ.
" I am not rich but I am rich in friendship "
ಅದು ಅವಳ ಫೇಮಸ್ ಡೈಲಾಗು . ಅವಳ ಎಲ್ಲ ಫ್ರೆಂಡ್ಸ್ ಇಂಜಿನಿಯರಿಂಗ್ ಸೇರಿದಾಗ ಉಳಿದ್ದದ್ದು ಇಬ್ಬರು. ಒಬ್ಬಳು (ವೀಣಾ )ಮತ್ತೊಬ್ಬಳು ಯಮುನಿ. ನಾನು , ಪೂರ್ಣಿ , ಸರಿ, K .C(ವೀಣಾ) , ರತನ್ ಸೇರಿ ಆರು ಜನರ ಗ್ರೂಪ್ ಕಟ್ಟಿದೆವು . ಅದಕ್ಕೆ PVS YATHRA ಅಂತ ನಾಮಕರಣವೂ ಆಯಿತು(ಎಲ್ಲರ ಹೆಸರ ಮೊದಲಕ್ಷರ ಸೇರಿಸಿದ್ದೆವು).
ಮೂರು ವರ್ಷದ ಆ ಸುಂದರ ಬದುಕು ಮತ್ತೆಂದು ಸಿಗದು . ಕ್ಯಾಂಟೀನಲ್ಲಿ ( ಬರಿ ಕಾಫಿ ಮಾತ್ರ ಸಿಗುವ ) ಕ್ಯಾಂಪಸ್ ನಲ್ಲಿ , ಕೊನೆಗೆ ರೋಡ್ನಲ್ಲು ನಮ್ಮ ತರಲೆ ಗಳು ಆಭಾದಿತವಾಗಿ ನಡೆಯುತ್ತಿದ್ದವು.ಒಮ್ಮೆ ಲೆಕ್ಚರರ್ ಒಬ್ಬರಿಂದ ಬೈಗುಳವೂ ಆಗಿತ್ತು " ರೋಡ್ ಇರೋದು ವೆಹಿಕಲ್ ಓಡಾಡೋಕೆ, ನೀವು ಆರು ಜನ ಓಡಾಡಲು ಅಲ್ಲ " ಅಂತ. ಹಾಗಂತ ಓದಿನಲ್ಲೇನು ಹಿಂದೆ ಬಿದ್ದಿರಲಿಲ್ಲ.
ಕಾಲೇಜ್ ನ ಬಳಿಯಿದ್ದ ಹಳೇ ಫ್ಯಾಕ್ಟರಿ ನಮ್ಮ ಬರ್ತ್ ಡೇ ಸೆಲೆಬೇರಶನ್ ಗೆ ಕಂಡುಕೊಂಡಿದ್ದ ಸ್ಪಾಟ್. ಹುಟ್ಟಿದ ಹಬ್ಬ ಅಸ್ಟು ಸುಲಭವಾಗಿ ಮುಗಿಯಿತ್ತಿರಲಿಲ್ಲ. ಅಂದು ಹುಟ್ಟಿದ ಹಬ್ಬ ಆಚರಿಸಿಕೊಳ್ಳುವವರು ಉಳಿದವರ ಬಗ್ಗೆ ಏನಾದ್ರೂ ದೂರು ಇದ್ರೆ ಅವತ್ತು ಹೇಳಲೇಬೇಕಿತ್ತು. ಅದು ನಮ್ಮಲಿದ್ದ ರೂಲ್ಸ್!!!!!. ಒಳ್ಳೆ ಮಜಾ ಇರುತ್ತಿತ್ತು ;-) ಖುಷಿಯಾಗಿ ಶುರುವಾಗುತ್ತಿದ್ದ ದಿನ ಒಮ್ಮೊಮ್ಮೆ ಕಣ್ಣೀರು ಬರಿಸಿ ಮುಗಿಯುತ್ತಿತ್ತು. ನಾನು , ಯಮುನಿ ಮುನಿಸಿಇನ್ನೇನು ದೂರವಾದೆವು ಅಂತ ಅನ್ನಿಸಿವುದರೊಳಗೆ ಮತ್ತೆ ಫೆವಿಕೋಲ್ ತರಾ ಅಂಟಿಕೊಂಡು ಬಿಡುತ್ತಿದೆವು .
ಫ್ರೆಂಡ್ಸ್ ಜೊತೆ ಜಗಳ ಆದಾಗ ಫೋನ್ ಮಾಡಿ ಸಮಾಧಾನ ಮಾಡಬೇಕು ಅಂತ ಹೇಳಿದ್ದು ಅದೇ ಯಮುನಿ . ಈ ಹತ್ತು ವರ್ಷಗಳಲ್ಲಿ ಕೊಂಡಿದ್ದು ನೆನಪಿಲ್ಲ . ದ್ವನಿಯಲ್ಲೇ ನನ್ನ ನಾಡಿಮಿಡಿತದ ಜಾಡು ಹಿಡಿವ ಯಮುನಿ ನನ್ನ ಜೀವನದ ಗೆಳತಿ ... ಜೀವದ ಗೆಳತಿ. ಅವಳ ಸ್ನೇಹದ ಹರಿವು ಹೀಗೆ ಸದಾ ಹಸಿರಾಗಿರಲಿ ಅನ್ನೋದೇ ನನ್ನ ಆಶಯ.
ಮೊದಲಿನಂತೆ ಎಲ್ಲ ಇಲ್ಲದಿದ್ದರೂ ಇನ್ನು ಅದೇ ಆತ್ಮೀಯತೆ ಉಳಿದಿದೆ ಅನ್ನೋದೇ ವಿಸ್ಮಯ .ಅದೆಸ್ಟು ಜನ ನನ್ನ ಮತನಾಡಿಸಿದಾಗೆಲ್ಲ ಕೇಳುವುದು ಹೇಗಿದ್ದಾರೆ ನಿನ್ನ ಫ್ರೆಂಡ್ಸ್ ಅಂತ. ಅಂತ ಆತ್ಮೀಯರು ನಮಗಿಲ್ಲವಲ್ಲ ಅಂತ ಹಲುಬಿದವರು ಎಸ್ಟೋ? ಹತ್ತು ವರ್ಷಗಳ ಏಳು ಬೀಳುಗಳಲ್ಲಿ ಒಮ್ಮೊಮ್ಮೆ ಜೋರಾಗಿ, ಒಮ್ಮೊಮ್ಮೆ ಕುಂಟುತ್ತ, ಮತ್ತೆ ಏಳುತ್ತಾ ಸಾಗುತ್ತಿದೆ ನಮ್ಮ ಯಾತ್ರೆ.
Really good friendship keep it up for ever
ReplyDelete